ಓಂಕಾರ ಸಮಿತಿಯ ಸನ್ಮಾನ್ಯ ಮಿತ್ರರೇ,
ಮಾರ್ಚ್ ೧೪ನೆ ಶುಕ್ರವಾರದಂದು ತಾವೆಲ್ಲ ಸೇರಿ ನಡೆಸಿ ಕೊಟ್ಟ ಶ್ರೀ ಸತ್ಯನಾರಾಯಣಸ್ವಾಮಿಯ ಪೂಜೆ ಒಂದು ಅದ್ಭುತ ಆಧ್ಯಾತ್ಮಿಕ ಅನುಭವ ನೀಡಿತು. ಈ ಪೂಜೆಗಾಗಿ ತಾವು ಮಾಡಿಕೊಂಡ ಪೂರ್ವಭಾವಿ ಸಿದ್ಧತೆಗಳಾಗಲಿ, ಪೂಜಾ ಸಮಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡ ಆಸ್ತಿಕರಿಗೆ ನೀಡುತ್ತಿದ್ದ ಸಲಹೆಗಳಲ್ಲಾಗಲಿ, ಸ್ವಯಂಸೇವಕರ ಉತ್ಸಾಹದಲ್ಲಾಗಲಿ - ಯಾವುದೇ ಕುಂದು ಕೊರತೆ ಇಲ್ಲದಂತೆ ನೋಡಿಕೊಂಡ ಸಮಿತಿಯ ರೂವಾರಿಗಳಿಗೆ ನಮ್ಮ ಹೃತ್ಪೂರ್ವಕ ನಮನಗಳು.
ಒಂದು ಆಧ್ಯಾತ್ಮಿಕ ಕಾರ್ಯಕ್ರಮವನ್ನು ಸ್ವತಃ ಮಾಡಿದ ಧನ್ಯತೆಯ ಭಾವವನ್ನು ನಮ್ಮಲ್ಲಿ ಜಾಗೃತಿಗೊಳಿಸಿದ ಈ ಪೂಜಾ ಕಾರ್ಯಕ್ರಮವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆ.
ಮುಖ್ಯವಾಗಿ ಪೂಜಾ ವಿಧಿವಿಧಾನಗಳನ್ನು ನಮಗೆ ತಿಳಿ ಹೇಳುತ್ತಾ ಪೂಜೆ ನಡೆಸಿಕೊಟ್ಟ ಶ್ರೀಲಕ್ಷ್ಮಿನಾರಾಯಣ ಆಚಾರ್ಯರಿಗೆ ನಾವು ಪ್ರತ್ಯೇಕವಾಗಿ ಆಭಾರಿಗಳು.
ಇಂತಹ ಅನೇಕ ಕಾರ್ಯಕ್ರಮಗಳು ಓಂಕಾರ ಸಮಿತಿಯ ವತಿಯಿಂದ ನಡೆದು ಆಸ್ತಿಕರ ಜತೆಗೆ ಸಮಿತಿಯ ಸದಸ್ಯರುಗಳು, ಸ್ವಯಂಸೇವಕರು ಕೂಡ ಧನ್ಯರಾಗಲಿ ಎಂದು ಭಗವಂತನಲ್ಲಿ ನಾವು ವಿನಯದಿಂದ ಪ್ರಾರ್ಥಿಸುತ್ತೇವೆ!.
ಕರುಣಾಕರ / ಮಮತಾ.
No comments:
Post a Comment